ಮೈನಾ (ಇಂಗ್ಲಿಷ್: ) ನಾಗಶೇಖರ್ ಇವರು ಬರೆದು ನಿರ್ದೇಶಿಸಿದ ೨೦೧೩ ರ ಕನ್ನಡ ಭಾಷೆಯ ಪ್ರಣಯ ನಾಟಕ ಚಿತ್ರ . ನಿಜ ಜೀವನದ ಘಟನೆಯನ್ನು ಆಧರಿಸಿ , ಈ ಚಿತ್ರವನ್ನು ಎಸ್.ರಾಜ್‌ಕುಮಾರ್‌ಗಾಗಿ ವಜ್ರೇಶ್ವರಿ ಕಂಬೈನ್ಸ್ ತಂಡವು ನಿರ್ಮಿಸಿದೆ . ಚೇತನ್‌ ಕುಮಾರ್‌ ಮತ್ತು ನಿತ್ಯಾ ಮೆನನ್‌ ಇವರು ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ . ಜಸ್ಸೀ ಗಿಫ್ಟ್ ಇವರು ಈ ಚಿತ್ರದ ಸಂಗೀತ ನಿರ್ದೇಶಕರು. ಈ ಚಲನಚಿತ್ರವು ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಗೆದ್ದು ಕನ್ನಡದ ಅತ್ಯುತ್ತಮ ಚಲನಚಿತ್ರ ಎಂಬ ಬಿರುದನ್ನು ಪಡೆಯಿತು. ಈ ಚಿತ್ರವನ್ನು ಪ್ರಸ್ತುತ ಹಿಂದಿಯಲ್ಲಿ ರೀಮೇಕ್ ಮಾಡಲಾಗುತ್ತಿದೆ. == ಕಥಾವಸ್ತು == ಸತ್ಯ (ಚೇತನ್ ಕುಮಾರ್) ಇವರನ್ನು ಪೊಲೀಸರು ಬೆನ್ನಟ್ಟುವ ಮೂಲಕ ಚಿತ್ರವು ಪ್ರಾರಂಭವಾಗುತ್ತದೆ. ಆತನ ಮೇಲೆ ೩೪ ನೇ ಸರಣಿ ಕೊಲೆ ಪ್ರಕರಣದ ಆರೋಪವಿದ್ದು , ಅಪರಾಧಿಯನ್ನು ಆರೋಪದ ಮೇಲೆ ಬೆಂಗಳೂರಿಗೆ ಸಾಗಿಸುವಾಗ , ತನ್ನನ್ನು ಬಂಧಿಸಿದ ತಂಡವನ್ನು ಮುನ್ನಡೆಸುತ್ತಿರುವ ಅಧಿಕಾರಿ ಎಸಿಪಿ ಬಿ. ಬಿ. ಅಶೋಕ್ ಕುಮಾರ್ (ಆರ್. ಶರತ್‌ಕುಮಾರ್) ಅವರೊಂದಿಗೆ ತನ್ನ ಕಥೆಯನ್ನು ಹಂಚಿಕೊಳ್ಳುತ್ತಾನೆ. ಈ ರೀತಿ ಪ್ರಾರಂಭಗಳ್ಳುವ ಚಿತ್ರವು ಅಂತಿಮವಾಗಿ ಸತ್ಯ ಮತ್ತು ಮೈನಾಳ ಸಾವಿನೊಂದಿಗೆ ಚಿತ್ರವು ಮುಕ್ತಾಯವಾಗುತ್ತದೆ. == ಸಾರಾಂಶ == ಸತ್ಯ (ಚೇತನ್ ಕುಮಾರ್) ಇವರನ್ನು ಪೊಲೀಸರು ಬೆನ್ನಟ್ಟುವ ಮೂಲಕ ಚಿತ್ರವು ಪ್ರಾರಂಭವಾಗುತ್ತದೆ. ಆತನ ಮೇಲೆ ೩೪ ನೇ ಸರಣಿ ಕೊಲೆ ಪ್ರಕರಣದ ಆರೋಪವಿದ್ದು , ಅಪರಾಧಿಯನ್ನು ಆರೋಪದ ಮೇಲೆ ಬೆಂಗಳೂರಿಗೆ ಸಾಗಿಸುವಾಗ , ತನ್ನನ್ನು ಬಂಧಿಸಿದ ತಂಡವನ್ನು ಮುನ್ನಡೆಸುತ್ತಿರುವ ಅಧಿಕಾರಿ ಎಸಿಪಿ ಬಿ. ಬಿ. ಅಶೋಕ್ ಕುಮಾರ್ (ಆರ್. ಶರತ್‌ಕುಮಾರ್) ಅವರೊಂದಿಗೆ ತನ್ನ ಕಥೆಯನ್ನು ಹಂಚಿಕೊಳ್ಳುತ್ತಾನೆ. ಸತ್ಯ (ಚೇತನ್‌ ಕುಮಾರ್)‌ ಈ ಚಿತ್ರದಲ್ಲಿ ದೂಧ್ ಸಾಗರ್ ಜಲಪಾತ ದ ಬಳಿ ರಿಯಾಲಿಟಿ ಗೇಮ್ ಶೋನಲ್ಲಿ ಸ್ಪರ್ಧಿಯಾಗಿರುತ್ತಾನೆ . ಒಂದು ಕಾರ್ಯದಲ್ಲಿ , ಅವನಿಗೆ ಸಾಧ್ಯವಾದಷ್ಟು ಹಣವನ್ನು ಸಂಗ್ರಹಿಸಬೇಕೆಂಬ ಟಾಸ್ಕ್ ಕೊಡಲಾಗುತ್ತದೆ . ಅದರ ಪ್ರಕಾರ ಸ್ಪರ್ಧಿಗಳು ತಮ್ಮ ಅಸಲಿ ಗುರುತನ್ನು ಯಾರಿಗೂ ತಿಳಿಸದೆ ಈ ಕಾರ್ಯವನ್ನು ಮಾಡಬೇಕಾಗಿತ್ತು . ಹಾಗಾಗಿ ಸತ್ಯ ಭಿಕ್ಷುಕನ ವೇಷ ಧರಿಸಿಕೊಂಡು ಅಂಗವಿಕಲನಾಗಿ ನಟಿಸುತ್ತಾ ಭಿಕ್ಷೆ ಬೇಡುವ ಸಮಯದಲ್ಲಿ ರೈಲಿನಲ್ಲಿ ಅವನು ಮೈನಾ (ನಿತ್ಯಾ ಮೆನೆನ್) ಎಂಬ ಹುಡುಗಿಯನ್ನು ಗುರುತಿಸುತ್ತಾನೆ ಮತ್ತು ಅವನು ತಕ್ಷಣ ಅವಳಿಂದ ಮೋಹಗೊಳ್ಳುತ್ತಾನೆ. ಅವಳು ಅವನಿಗೆ ₹ ೧೦೦ ರ ನೋಟು ಕೊಟ್ಟು ಅದನ್ನು ದುರುಪಯೋಗ ಬಳಸದೆ ಉಪಯೋಗಿಸಬೇಕೆಂಬ ಮಾತನ್ನು ಹೇಳುತ್ತಾಳೆ. ಆಟದ ನಿಯಮದ ಪ್ರಕಾರ ಸತ್ಯ ಆ ಹಣವನ್ನು ಆಟದ ಮುಖ್ಯಸ್ಥನಿಗೆ ನೀಡಬೇಕಾಗಿತ್ತು ಆದರೆ ಭಾವನೆಗಳೊಳಗಾಗಿ ಅವನು ನಿರಾಕರಿಸಿ ಆಟದಿಂದ ಹೊರಬೀಳಲು ಇಷ್ಟಪಡುತ್ತಾನೆ . ನಂತರ ಅವನು ಅದೇ ರೈಲಿನಲ್ಲಿ ಭಿಕ್ಷೆ ಬೇಡುವ ಬದಲು ದಿನಪತ್ರಿಕೆಯನ್ನು ಹಂಚಲು ಶುರುಮಾಡುತ್ತಾನೆ . ಇದು ಮೈನಾಳನ್ನು ಅಪಾರವಾಗಿ ಸಂತೋಷಪಡಿಸುತ್ತದೆ . ಇದರಿಂದಾಗಿ ದಿನ ಕಳೆದಂತೆ ಅವರಿಬ್ಬರೂ ಇನ್ನಷ್ಟೂ ಹತ್ತಿರವಾದರು . ಅವಳು ಅಂಗವಿಕಲೆ ಎಂದು ಹೇಳುವ ಮುನ್ನವೇ ಅವಳ ಕೈಚೀಲದ ಕಳ್ಳತನವಾಗುತ್ತದೆ . ಈ ಘಟನೆಯಿಂದ ಮೈನಾ ಅಂಗವಿಕಲೆ ಎಂಬ ಸತ್ಯ ತಿಳಿಯುತ್ತದೆ ಹಾಗೂ ಮೈನಾಳಿಗೆ ಸತ್ಯ ಅಂಗವಿಕಲನಲ್ಲ ಎಂಬ ಮಾತು ತಿಳಿಯುತ್ತದೆ. ನಿಜ ತಿಳಿದ ಮೇಲೂ ಸತ್ಯ ಅವಳನ್ನು ಒಪ್ಪಿಕೊಳ್ಳುತ್ತಾನೆ ಎಂಬ ಭರವಸೆ ಅವಳಿಗಿರಲಿಲ್ಲ . ಆದರೆ ಸತ್ಯನು ಮೈನಾಳನ್ನು ಯಾವಾಗಲೂ ಇಷ್ಟಪಡುತ್ತೇನೆ ಎಂಬ ಮಾತನ್ನು ವ್ಯಕ್ತಪಡಿಸುತ್ತಾನೆ . ನಂತರ ಇಬ್ಬರೂ ಮದುವೆಯಾಗಿ ಬೆಂಗಳೂರಿಗೆ ತೆರಳುತ್ತಾರೆ . ಹೀಗೆ ಅವರಿಬ್ಬರ ಪ್ರೀತಿ ಶುರುವಾಯಿತು . ಈ ರೀತಿ ಪ್ರಾರಂಭಗಳ್ಳುವ ಚಿತ್ರವು ಅಂತಿಮವಾಗಿ ಸತ್ಯ ಮತ್ತು ಮೈನಾಳ ಸಾವಿನೊಂದಿಗೆ ಮುಕ್ತಾಯವಾಗುತ್ತದೆ. == ಪಾತ್ರಗಳು == == ಪ್ರಶಸ್ತಿಗಳು == == ಪ್ರೊಡಕ್ಷನ್ == ಮೈನಾ ನಿಜ ಜೀವನದ ಘಟನೆಯನ್ನು ಆಧರಿಸಿದೆ. ೧೦೦ ಕ್ಕೂ ಹೆಚ್ಚು ಕೊಲೆ ಪ್ರಕರಣಗಳನ್ನು ಪತ್ತೆ ಹಚ್ಚಿದ ಮಾಜಿ ಕಾಪ್ ಬಿ.ಬಿ ಅಶೋಕ್ ಕುಮಾರ್ ಅವರು ನಿರ್ದೇಶಕರಿಗೆ ಕೊಲೆ ರಹಸ್ಯವನ್ನು ವಿವರಿಸಿದ್ದು ಅದು ಕಥೆಯ ವಿಷಯವಾಯಿತು. ಕ್ಯಾಮರಾಮ್ಯಾನ್ ಕಾಶಿ , ಸಂಪಾದಕ ಜಾನಿ ಹರ್ಷ, ಮತ್ತು ಸಂಜು ವೆಡ್ಸ್ ಗೀತಾ ಚಿತ್ರದ ಸಂಗೀತ ನಿರ್ದೇಶಕರಾದ ಜಸ್ಸೀ ಗಿಫ್ಟ್ ಅವರನ್ನು ನಿರ್ದೇಶಕ ನಾಗಶೇಖರ್ ತಮ್ಮ ತಂಡದಲ್ಲಿ ಉಳಿಸಿಕೊಂಡಿದ್ದರು . ಈ ಚಿತ್ರದ ಚಿತ್ರೀಕರಣವು ಕರ್ನಾಟಕದ ಕೊಂಕಣ ಪ್ರದೇಶದಾದ್ಯಂತ ಕರ್ನಾಟಕ ಮತ್ತು ಗೋವಾದ ಗಡಿಯಲ್ಲಿರುವ ದೂಧ್ ಸಾಗರ್ ಜಲಪಾತಗಳಂತಹ ಸ್ಥಳಗಳನ್ನು ಒಳಗೊಂಡಂತೆ ಮಾಡಲಾಯಿತು. ಸ್ಥಳಗಳು ಉತ್ತರ ಕನ್ನಡದ ಕರಾವಳಿಯನ್ನೂ ಸಹ ಒಳಗೊಂಡಿವೆ. == ಧ್ವನಿಸುರುಳಿ == ಜಸ್ಸೀ ಗಿಫ್ಟ್ ಎಲ್ಲಾ ಹಾಡುಗಳನ್ನು ಸಂಯೋಜಿಸಿದ್ದಾರೆ . == ಉಲ್ಲೇಖಗಳು ==